ನಿತ್ಯಪೂಜಾ ಸೇವಾ

ಈ ಸೇವೆಯು ಒಂದು ದಿನದಾಗಿರುತ್ತದೆ. ಪೂಜೆಗೆ ಒಂದು ದಿನ ಮುಂಚಿತವಾಗಿ ತಮ್ಮ ಹೆಸರು ನೋಂದಾಯಿಸಬೇಕು ಮತ್ತು ಆ ದಿನದ ಸೇವಾಕರು ಶುಚಿತರಾಗಿ ಬೆಳಗ್ಗೆ 7.30 ಗಂಟೆಗೆ ದೇವಾಲಯದ ಪ್ರಾಂಗಣದಲ್ಲಿ ಇರಬೇಕು. ನೈವೆದ್ಯಕ್ಕೆ ಸ್ವಾಮಿಯ ವಸ್ತ್ರವನ್ನು ನೀಡಲಾಗುತ್ತದೆ.

ಶಾಶ್ವತ ಅನ್ನದಾನದ ಸೇವೆ

ಮಗು ಹುಟ್ಟಿದ ದಿನ, ವಿವಾಹ ದಿನ, ಸ್ಮರಣೆಯ ದಿನ ನಿಮ್ಮ ಕುಂಟುಬದಲ್ಲಿ ವಿಶೇಷವಾಗಿದ್ದಲ್ಲಿ ಈ ಸ್ವಾಮಿ ಸನ್ನಿಧಿಯಲ್ಲಿ ನೋಂದಾಯಿಸಿ ಭಾನುವಾರದಿಂದ ಶನಿವಾರದ ಒಳಗೆ ಶುಭ ಸ್ಮರಣೆ ಇದಲ್ಲಿ ಶನಿವಾರದಂದು ಶಾಶ್ವತವಾಗಿ ನಿಮ್ಮ ಹೆಸರಿನಲ್ಲಿ (ಒಂದು ದಿನ) ಅನ್ನದಾನ ಮಾಡಲಾಗುತ್ತದೆ.

ಶ್ರಾವಣ ಮಾಸದ ಪೂಜಾ

ಶ್ರಾವಣ ಮಾಸದ ಪ್ರತಿ ಶನಿವಾರದಂದು ಶ್ರೀ ಆಂಜನೇಯ ಸ್ವಾಮಿಗೆ ವಿಶೇಷವಾಗಿ ಅಲಂಕಾರ ಇರುತ್ತದೆ. ಮೂರನೇ ಶನಿವಾರದಂದು ಶ್ರೀ ಸ್ವಾಮಿಗೆ ಬೆಳ್ಳಿಯ ವಜ್ರಾಂಗಿ ಅಲಂಕಾರ ಇರುತ್ತದೆ, ಭಕ್ತ ಮಹಾಶಯರು ಪಾಲ್ಗೋಳ್ಳಬಹುದು.

ಅಮಾವಾಸ್ಯೆ ಪೂಜಾ

ಪ್ರತಿ ತಿಂಗಳ ಅಮಾವಾಸ್ಯೆಯೆಂದು ಶ್ರೀ ಸ್ವಾಮಿಗೆ ವಿಷೇಶವಾಗಿ ಪೂಜೆಗಳು ನಡೆಯುತ್ತವೆ. ಉತ್ಸವ ಅನ್ನದಾನ ಇರುತ್ತದೆ. ಸೇವೆ ನೇರವೇರಿಸಲು ಮುಂಚಿತವಾಗಿ ತಮ್ಮ ಹೆಸರನ್ನು ನೊಂದಾಯಿಸಿ ಸೇವೆಯಲ್ಲಿ ಪಾಲ್ಗೋಳ್ಳಬಹುದು.

ಪ್ರಸಾದ ಸೇವಾ

ಶ್ರೀ ಸ್ವಾಮಿ ವಡಮಾಲ ಸೇವಾ ಮಾಡಿಸುವವರು ಮೊದಲು ಸ್ವಾಮಿಗೆ ನೈವೇದ್ಯ ಅರ್ಪಿಸಿ ನಂತರ ಪ್ರಸಾದವನ್ನು ವಿತರಿಸಲಾಗುವುದು, ಹೊರಗಡೆಯಿಂದ ತಂದ ಪ್ರಸಾದವನ್ನು ನೈವೇದ್ಯ ಮಾಡುವುದಿಲ್ಲ.

ವರ್ಷದ ಅರ್ಚನಾ ಸೇವಾ

ಶ್ರೀ ಸ್ವಾಮಿಗೆ ಪ್ರತಿ ಶನಿವಾರದಂದು 48 ಶನಿವಾರದೊಳಗೆ ಹೆಸರು ಗೋತ್ರವನ್ನು ಹೇಳಿ ಅರ್ಚನೆ ಮಾಡುವುದು.

ಉತ್ಸವ ಸೇವಾ

ಸ್ವಾಮಿಗೆ ವಿಶೇಷ ದಿನ ಮತ್ತು ಇಷ್ಠ ದಿನದಂದು ಭಕ್ತಾಧಿಗಳು ಸೀತಾರಾಮ ಪ್ರಕಾರ ಉತ್ಸವವನ್ನು ನೇರವೇರಿಸಹುದು.

ವಿಶೇಷ ಕಲಶಾಭಿಷೇಕ

ಶ್ರೀ ಸ್ವಾಮಿಗೆ 108 ಕಲಶಗಳಿಂದ ಅಭೀಷೇಕ

ಶ್ರೀ ರಾಮ ಕೋಟಿ ಸೇವಾ

ಶ್ರೀ ಆಂಜನೇಯ ಸ್ವಾಮಿ ಸನ್ನಿದಾನದಲ್ಲಿ ರಾಮಕೋಟಿ ಪುಸ್ತಕವನ್ನು ಭಕ್ತರು ಮುದ್ರಿಸಿ ಅರ್ಪಿಸಬಹುದು ಮತ್ತು ಬರೆದು ಅರ್ಪಿಸಬಹುದು.

ಕಾರ್ತಿಕಾ ಸೋಮವಾರ

ಶ್ರೀ ಸ್ವಾಮಿಯ ಸನ್ನಿದಾನದಲ್ಲಿ ಕಾರ್ತಿಕ ಮಾಸದಂದು ಪ್ರತಿ ಸೋಮವಾರದಂದು ವಿಶೇಷ ಪೂಜಾ ನೇರವೇರಿಸಬಹುದು.

ಲಕ್ಷ ಅರ್ಚನಾ ಸೇವೆ

ಶ್ರೀ ಸ್ವಾಮಿಯ ಸನ್ನಿದಾನದಲ್ಲಿ ಲಕ್ಷ ಅರ್ಚನಾ ಸೇವೆ ಮಾಡಿಸಬಹುದು.

ಅಲಂಕಾರಗಳು
ಬೆಣ್ಣೆ ಅಲಂಕಾರ, ಅರಿಶಿನ ಅಲಂಕಾರ, ಗಂಧಾಲಂಕಾರ, ವಿಳೆದೆಲೆ ಅಲಂಕಾರ, ಕೊಬ್ಬರಿ ಅಲಂಕಾರ, ಚಂದನ ಅಲಂಕಾರ, ಹೂವಿನ ಅಂಲಂಕಾರ, ತರಕಾರಿ ಅಲಂಕಾರ ಮತ್ತು ಇನ್ನೂ ಮುಂತಾದ ಅಲಂಕಾರಗಳನ್ನು ಮಾಡಿಸಬಹುದು.
ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ
ಬನ್ನಿಮಂಗಲ, ಕುಂದಾಣ ಹೋಬಳಿ,
ಆಲೂರು ದುದ್ದನಹಳ್ಳಿ (ಅಂಚೆ),
ಬೆಂಗಳೂರು ಗ್ರಾಮಾಂತರ-562110
ಪ್ರತಿ ದಿನ ಬೆಳಗ್ಗೆ 8.00 ರಿಂದ ಸಂಜೆಯವರೆಗೂ